IIT-JEE ಮತ್ತು  NEET ಗೇ ಕೋಟಾ ಎಂಭ ಸರಸ್ವತೀಯ ತವರು 

ಇವತ್ತಿನ ದಿನಗಳಲ್ಲಿ ಮೆಡಿಕಲ್ ಮತ್ತು IIT-JEE ಸೀಟನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲಾ. ಪ್ರತಿ ವರ್ಷ್ ಸುಮಾರು ೧೫ ಲಕ್ಷ ವಿದ್ಯಾರ್ಥಿಗಳು ಮೆಡಿಕಲ್ ಮತ್ತು IIT-JEE  ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ  ಕೇವಲ ೧ ರಿಂದಾ ೩% ವಿದ್ಯಾರ್ಥಿಗಳಗೆ ಮಾತ್ರ IIT ಮತ್ತು ಮೇಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರೆಯುತ್ತದೆ. ಆದುದರಂದಾ ಈ  ಪ್ರವೇಶ ಪರೀಕ್ಷೆಗಳಿಗೆ  ಟ್ರೇನಿಂಗ ಕೊಡಲು ಸಾಕಷ್ಟು ಕೋಚಿಂಗ್ ಸೌಂಸ್ಥೆಗಳು ಹುಟ್ಟಿಕೊಂಡಿವೆ. ಹಿಂಥಾ  ಸೌಂಸ್ಥೆಗಳು ಇವತ್ತಿನ ದಿನ ನಮ್ಮ ದೇಶದ ತುಂಬೆಲ್ಲಾ ಹರಡಿವೆ.

ಕೋಟಾ ಎಂಭ ರಾಜಸ್ಥಾನದ  ರಾಜ್ಯದ ಒಂದು ಪಟ್ಟಣದಲ್ಲಿ ಹಿಂತಹಾ ಸೌಂಸ್ಥಗಳಿಗೆ ನಮ್ಮ ಭಾರತ ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳ ಕೋಚಿಂಗಿಗಾಗಿ ಬರುತ್ತಾರೆ. ಕೋಟಾ ನಗರ ಚಂಬಲ ನದಿಯ ದಂಡೆಯ ಮೇಲೆ ಇದೆ.  ಈ ಚಂಬಲ್ ನದಿಗೆ ಕಟ್ಟಿದೆ ಬ್ಯಾರೇಜೇ ಕೋಟನಗರದ ನೀರಿನ ಮುಖ್ಯ ವಾಹಿನಿಯಾಗಿದೆ.  ಕೋಟಾ ಮುಂಚೆ  ಶಿಕ್ಷಣ ಕೇಂದ್ರವಾಗಿ ಇರಲಿಲ್ಲಾ, ಈ ಮಾರ್ಪಾಟಾಗಿದ್ದು ಇಸವಿ ೨೦೦೦ ರದ ನಂತರ. ಇದು ಮುಂಚೆ ಉದ್ಯಮ ನಗರವಾಗಿತ್ತು. ಈಗ ಒಂದು ವರ್ಷದಲ್ಲಿ ಸುಮಾರು ೨ ರಿಂದ ೩ ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ  ಕೋಚಿಂಗಿಗಾಗಿ  ಕೋಟಾಗೆ ಬರುತ್ತಾರೆ.

ಕೋಟ ನಗರ ಶಿಕ್ಷಣ ಕೇಂದ್ರವಾಗಿ  ಮಾರಪಟ್ಟಿದು ಇಲ್ಲಯ ಬನಾಸಲ್ ಕ್ಲಾಸಿಸ ಸೌಂಸ್ಥೆ ಯಿಂದ. ೧೯೮೩ ಇಸವಿಲ್ಲಿ ಶ್ರೀ ಬನಾಸಲ್ ರವರು ಸ್ವಥ  ಅಂಗವಿಕಲಾಗಿದ್ದ್ರು, ಒಂದು ಸಣ್ಣ ಕೊನೆಯಲ್ಲಿ IIT-JEE ಕೋಚಿಂಗ್ ಪ್ರಾರಂಭ ಮಾಡಿದರು. ಅಂದು ಶ್ರೀ ಬನ್ಸಲ್ ರವರು ನೆಟ್ಟ ಬೀಜ ಇವತ್ತು ಭಾರತದ ಭೂಪಟದಲ್ಲಿ ಕೋಟ ಪಟ್ಟಣದ ಭವಿಷ್ಯವನ್ನೇ ಬದಲಿಸಿತು . ತದನಂತರ ಮಹೇಶ್ವರಿ ಸಹೋದರರು ಅಲೆನ್ ಎಂಭ ಸೌಂಸ್ಥೆ ಯನ್ನು ಹುಟ್ಟುಹಾಕಿದರು. ಇವರು AIPMT (ಇವತ್ತು ಅದು NEET) ಮೆಡಿಕಲ್ ಪ್ರವೇಶ ಪರೀಕ್ಷೆಯನ್ನು  ಮುಖ್ಯವಾಗಿ  ಗುರಿಯಿಟ್ಟು ಅಲೆನ್ ಸೌಂಸ್ಥೆ ಪ್ರಾರಂಭ ಮಾಡಿದರು. ಆದರೆ ಈಗ IIT-JEE ಕೋಚಿಂಗ್ ಕೂಡ ಅಲೆನ್ ಸೌಂಸ್ಥೆ ಕೊಡುತ್ತದೆ. ಲಿಮ್ಕಾ ಬುಕ ಆಫ್  ರಿಕೋರ್ಡ್ ಪ್ರಕಾರ ೨೦೧೪ ಇಸವಿಯಲ್ಲಿ ಅಲೆನ್ ಕೋಟಾ  ಸೆಂಟರ್, ೭೪೦೦೦ ವಿದ್ಯಾರ್ಥಿಗಳನ್ನು  IIT-JEE ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆ ಗಾಗಿ ಎಡ್ಮಿಶನ್ ಮಾಡಿಕೊಂಡಿತ್ತು.  ಮಹೇಶ್ವರಿ ಸಹೋದರರು ಹೇಳುವ ಪ್ರಕಾರ ಅಲೆನ್ ಕೋಟಾ ಸೌಂಸ್ಥೆಯ ಗುರಿ,೨೦೨೦ ರಲ್ಲಿ  ೨ ಲಕ್ಷ ವಿದ್ಯಾರ್ಥಿಗಳು.

Kota

ವೈಬ್ರಂಟ ಅಕೆಡಮಿ, ರೆಸೊನಾನ್ಸ್ , ಕ್ಯಾರಿಯರ ಪಾಯಿಂಟ್, ರಾವ್ ಅಕೆಡಮಿ  ಸೊರ್ವೋತಮ ಅಕೆಡಮಿ  ಇಟೋಸ್ ಮತ್ತು ನೂರಾರು ಸೌಂಸ್ಥೆಗಳು ಕೋಟಾದಲ್ಲಿವೆ  ಇವೆಲ್ಲವೂ ಕೋಟಾದಲ್ಲಿ ಹುಟ್ಟಿ ದೇಶದ ತುಂಬೆಲ್ಲ ಬ್ರಾಂಚ್ಗಳನ್ನು ಹೊಂದಿವೆ.  ಒಟ್ಟಾಗಿ ಹೇಳಬೆಕೆಂದರೆ ಕೋಟಾ  ನಗರ ಕೋಚಿಂಗ್ ಸೌಂಸ್ಥೆಗಳಿಂದ ತುಂಬಿ ಹೋಗಿದೆ.

ಕೋಟಾದಲ್ಲಿ ವಿದ್ಯಾರ್ಥಿಗಳಿಗೆ ಇರಲು ಹಾಸ್ಟೆಲಗಳು ಸಾಕಷ್ಟಿವೆ. ಕೆಲವು ಹಾಸ್ಟೆಲಗಳಲ್ಲಿ ವಿದ್ಯರ್ಥಿಯ ಜೊತೆಗೆ ತಂದೆ ಮತ್ತು ತಾಯಿಗಳು ಸಹ ಇರಬಹುದಾಗಿದೆ. ವಟ್ಟಲ್ಲಿ ಹೇಳಬೇಕೆಂದರೆ ಅಭ್ಯಾಸದ  ಅನುಕೂಲಕ್ಕಾಗಿ ಎಲ್ಲ ತರಹದ ಸವಲತ್ತುಗಳು ಕೋಟಾದಲ್ಲಿವೆ.

ಕೋಟಾ ರೈಲುವೆ ನಿಲ್ದಾಣದಿಂದ ಹೊರಬಂದ ಕೂಡಲೇ ಇಲ್ಲಿ ಕಾಣುವುದು  ಶಾಹುರುಖಾನ್, ಅಮೀರಖಾನ್ ಅಕ್ಷೆಯಕುಮಾರ್ ಕೈಟ್ರಿನಾ ಕೈಪನ ವಿದ್ಯಮಾನಗಲ್ಲ. ಪ್ರವೇಶ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರಾಯಾಂಕ್ ಒನ್, ಟು  ತ್ರಿ ಮತ್ತು ಇತರ ಉನ್ನತ ರಾಯಾಂಕ್ ಪಡೆದ ವಿದ್ಯರ್ಥಿ ಮತ್ತು ವಿದ್ಯಾರ್ಥಿಣಿಗಳ ಪೋಸ್ಟರಗಳು. ಕೋಟಾದಲ್ಲಿ ಹಿಂಥಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಣಿಗಳೇ ನಿಜವಾದ ಹೀರೋ ಮತ್ತು ಹೀರೋಯಿನ್ ಗಳು. ಏಪ್ರಿಲ್ ರಿಂದ ಆಗುಸ್ಟ್ ತಿಂಗಳಲ್ಲಿ ಇಡೀ ಕೋಟಾ ನಗರ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ರಾಯಾಂಕ್  ಪಡದೆ ವಿದ್ಯಾರ್ಥಿಗಳ ಪೋಸ್ಟರಗಳಿಂದ ಹೊಸ ವಧುವಿನಂತೆ ಕಂಗೊಳಿಸುತ್ತದೆ.

ಕರ್ನಾಟಕ ದಿಂದ ಕೋಟಾಗೆ ಹೋಗಲು ರೈಲ್ ಉತ್ತಮ ಮಾರ್ಗ. ಕೋಟಾದಲ್ಲಿ ವಿಮಾನ ನಿಲ್ದಾಣ ಹೆಸರಿಗೆ ಮಾತ್ರ ಇದೆ. ೨೦೦೫ ತದನಂತರ ಇಲ್ಲಿ ವಿಮಾನ ಹಾರಾಟ ಇಲ್ಲಿ. ಹತ್ತಿರದ ವಿಮಾನ ನಿಲ್ದಾಣವೆಂದರೆ ಜೈಪುರ. ಅದು ಕೋಟಾ ದಿಂದ ೨೪೫ ಕಿಲೋಮೀಟರ ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಭಾಗದಲ್ಲಿ ಕೊಂಕಣ್ ರೈಲು ಮಾರ್ಗದಿಂದ ಮುಂಬಾಯಿಮುಖಾಂತರ ದೆಹಲಿಗೆ  ಹೋಗುವ ರೈಲುಗಳು ಕೋಟಾದಮೇಲೆ ಹೋಗುತ್ತವೆ. ಮತ್ತು  ಕರ್ನಾಟಕದ ಪೂರ್ವದ ಭಾಗದಲ್ಲಿ  ಸಾಗುವ ಜೈಪುರ್ ಎಕ್ಷಪ್ರೆಸ್ಸ್ ಕೋಟಾದ ಮೇಲೆ ಸಾಗುತ್ತದೆ.

ನಮ್ಮ ಕರ್ನಾಟಕದ ವಿದ್ಯಾರ್ಥಿಗಳಿಗೆ ಕೋಟಾದಲ್ಲಿ ಸ್ವಲ್ಪ ಮಟ್ಟಿಗೆ ಆಗುವ ತೊಂದರೆ ಏನೆಂದರೆ ಇಲ್ಲಿ ಕೋಚಿಂಗ್  ಸೌಂಸ್ಥೆಗಲ್ಲಿ ಹಿಂದಿಯನ್ನೇ ಹೆಚ್ಚಲಾಗಿ ಬಲಿಸುತ್ತಾರೆ.  ಇದು ಅಷ್ಟೇನು ಅನಾನುಕೂಲತೆ ಆಗುವದಿಲ್ಲ ಎಂದು ನನಗೆ ಅನುಸಿತ್ತುದೆ. ಸ್ವಲ್ಪ ದಿನಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಗೆ ಇದು ಸರಿ ಹೋಗುತ್ತದೆ ಎಂದು ನನ್ನ ಅನಿಸಿಕೆ.

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

Leave a Reply

Your email address will not be published. Required fields are marked *