ಮರೆತ ಬೆಳಗಾವಿ ಕುಂದಾ

ನಾನು ಹುಬ್ಬಳ್ಳಿಗೆ ಬಂದಿದ್ದು ಎಂ ಬಿ ಬಿ ಎಸ್ ಕಲ್ಯಾಕ  ಅದು ೧೯೮೭ ಇಸವಿಯಲ್ಲಿ ಅವತ್ತಿನಿಂದ ಇವತ್ತಿನವರೆಗೂ ಇಲ್ಲೆ ಹುಬ್ಬಳ್ಳಿಯ್ಯಾಗ ನೆಲೆಸೇವಿ . ನಡುವೆ ಹೆಚ್ಚನ ವ್ಯಾಸಂಗಕ್ಕ ಅಂದರ  ಎಮ್ ಡಿ ಕಲ್ಯಾಕ ಬೆಳಗಾವಿ ಮತ್ತ ಡಿ ಎಮ್ ಕಲ್ಯಾಕ ಬೆಂಗಳೂರಿಗೆ ಹೋಗಿದ್ದೆವು ಅದ ಬಿಟ್ಟರೆ ಜೀವನ ಇಲ್ಲೆ ನೆಡದೈತಿ. ಕಿಮ್ಸನ್ಯಾಗ ಸಹಪ್ರಾಧ್ಯಾಪಕ ಅಂತ ಕೆಲೇಸಾ ಮಾಡಾಕತ್ತೀವಿ.

ಹುಬ್ಬಳ್ಳಿಗೆ ಬಂದು ನೆಲಸಿ ಸುಮಾರು ಮೂವತ್ತು  ವರ್ಷ ಆಯಿತು ಅದ್ಯಾಕೊ ಕುಂದ ತಿಂದೆ ಇರಲಿಲ್ಲಾ. ಇಲ್ಲಿ ಹುಬ್ಬಳ್ಳಿಯಲ್ಲೂ ಕುಂದಾ ಮಾಡತಾರ ಆದರೆ ಬೆಳಗಾವಿ ಕುಂದಾದಂಗ ರುಚಿ ಇರಂಗಿಲ್ಲಾ. ಇಲ್ಲಿ ಹುಬ್ಬಳ್ಳಿಯಲ್ಲಿ ಪೇಡೆ ಚೊಲೋ ಸಿಗತಾವ ಅದರ ಕುಂದಾ ಬೆಳಗಾವಿದ ಬೆಸ್ಟ್.

ಮೊನ್ನೆ ನನ್ನ ಒಂದು ಬೆಳಗಾವಿ  ಪೇಷಂಟು ಬಂದಿದ್ರು ಅವರು ತುಂಬಾ ಪ್ರೀತಿಯಿಂದಾ ಬರುವಾಗಾ ಬೆಳಗಾವಿ ಕುಂದಾ ತಂದು ಕೊಟ್ರು ಅದನ್ನು ಮನಿಗೆ ತೊಕೊಂಡ  ಹೋಗಿ ಡೈನಿಂಗ್ ಟೇಬಲ್ ಮೇಲೆ ಇಟ್ಟೆ.  ಅಪ್ಪರಿಗೆ ಈಗ ಸುಗರ ಅದಕ್ಕ ಅವರ ನನ್ನ ಮುಂದ ಸಿವಿ ತಿನಂಗಿಲ್ಲಾ ನಾ ಇಲ್ಲದಾಗ ಸಿವಿ ತಿಂತಾರ ಅದು  ಅವ್ವಾಗು ಗೊತ್ತಿಲ್ಲದಂಗ. ಮಾನ್ಯನ ಮಂದಿ ಎಲ್ಲಾ ತಿಂದ್ರು ಅಂತ ನನಗ  ಅವ್ವಾ ಹೇಳಿದ್ಲು, ಇದಷ್ಟ ಉಳದೈತಿ ನೋಡ್ರಿ ಅಂತ ನನ್ನ ಪ್ರಾಣ ಸಂಗಾತಿ ನನಗ  ಕೊಟ್ಲು, ಅವಾಗ ನನಗ ನನ್ನ ಬಾಲ್ಯಾ ನೆನಪಾಯಿತು

ಬೆಳಗಾವಿ ಕುಂದಾದ ರುಚಿ ನನಗ ಹತ್ತಿದ್ದು ಸಣ್ಣವನಿದ್ದಾಗಿನಿಂದಾ  ಮನ್ಯಾಗ ಅಪ್ಪರದು ಸಿರಿ ವ್ಯಾಪಾರ  ೮ ಮಗ್ಗಾ ಇದ್ದುವು.  ವಾರಕ್ಕೊಮ್ಮಿ ಅಪ್ಪರ ಮನ್ಯಾಗ ನೇಕಾರರು ವಾರಾ ಪೂರ್ತಿ ನೆದ ಸಿರಿನ ಹಳದಿ ಅರಬಿಗ್ಯಾಗ  ಘಂಟ  ಕಟ್ಟಿಕೊಂಡ   ಮುಂಜಾನೇ ೬ ಘಂಟೆಗೆ  ವಸ್ತಿಗಿ ಬಂದ್ದಿದ್ದ ಬಸ್ಸ ಹಿಡಕೊಂಡ ಬೆಳಗಾವಿ ಹೋಗತ್ತಿದ್ದರು. ಅವಾಗ ಸುರೇಬಾನಿಂದ (ಬೆಳಗಾವಿ ಜಿಲ್ಲದಾಗ ರಾಮದುರ್ಗ ತಾಲೂಕನ್ಯಾಗಿ ಒಂದ ಹಳ್ಳಿ)  ಡೈರೆಕ್ಟ್   ಬೆಳಗಾವಿಗೆ ವಸ್ತಿ ಬಸ್ಸ ಒಂದ, ಆ ಬಸ್ಸ ಏನಾರ ತಪ್ಪತೊ ಬೆಳಗಾವಿ ಹೋಗಾಕ ಎರಡ ಅಥವಾ ಮುರ ಬಸ್ಸ ಬದಲ ಮಾಡಬೇಕಿತ್ತು. ವಜ್ಜೆ ಸಿರಿ ಘಂಟ ಹೊತ್ತಕೊಂಡು ಬಸ್ಸ ಬದಲ ಮಾಡುದು ಬಹಳ ತ್ರಾಸಿನ ಕೆಲಸ, ಅದಕ್ಕ ಮುಂಜೇನ ವಸ್ತಿ ಬಸ್ಸ ಹಿಡಕೊಂಡ  ಅಪ್ಪರ್ ಬೆಳಗಾವಿ ಹೋಗತ್ತಿದ್ರು .

ಅಲ್ಲಿ ಸಾವಕಾರ ಕಡೆ ಸಿರಿ ಕೊಟ್ಟ ರೊಕ್ಕ ಇಸಗೊಂಡು ಅದರಾಗ ಕುಂದಾ ಗಿಂದ ಮತ್ತೇನರ ಸಂತಿ ಮಾಡಕೊಂಡ ಸಂಜಿ ೬ ಘಂಟೆಗೆ ಅದ ವಸ್ತಿ ಬಸ್ಸಿಗೆ ಬೆಳಗಾವಿಯಿಂದ  ನಮ್ಮ ಊರ  ಸುರೆಬಾನಕ್ಕ ಬರತ್ತಿದ್ದರು. ಮನಿಗೆ ಬಂದ ಸೇರಾಕ ರಾತ್ರಿ ೧೦ ರಿಂದ ೧೧ ಘಂಟೆ ಅಗುತ್ತಿತ್ತು

ಅಕಾಲ ತುಂಬಾ ಕಠಿಣ, ರಿಕ್ಷಾದವರ ರೊಕ್ಕಾ  ಹೆಚ್ಚ ಕೇಳತಾರಂತ  ವಜ್ಜೆ ಸಿರಿ ಘಂಟ ಹೊತಕೊಂಡ ಬೆಳಗಾವಿ ಬಸ್ ಸ್ಟ್ಯಾಂಡ್ನಿಂದ  ಶಹಾಪುರ ತನಕ  ನೆಡಕೊಂಡ ಹೋಗತ್ತಿದ್ರು.  ಬೆಳಗಾವಿಗೆ ಹೋಗಿ ಸಿರಿ ಮಾರಿದ ಮೇಲೆ ಮನಿ ಸಂತಿ, ನೇಕಾರರ ಪಗಾರ  ಮತ್ತು ಸಿರಿಗೆ ರೇಶ್ಮಿ ಏನಾರ ಸಿರಿ ರೇಟ್ ಸರಿ ಸಿಗ್ಗಲಿಲ್ಲಾ ಅಂದ್ರ ಲಾಸ್ ಆದ್ರು ಸಿರಿ ಮಾರಬೆಕಾಗುತ್ತಿತ್ತು ಇಲ್ಲ ಅಂದ್ರ ಮನಿ ನೆಡಿತಿರಲಿಲ್ಲಾ.

ಸಿರಿಗೆ  ರೇಟ್ ಸರಿ ಸಿಗಲಿಲ್ಲಾ ಅಂದ್ರ ಆ  ವಾರ ಕುಂದಾ ತರುತ್ತಿರಲಿಲ್ಲಾ ಇಂಥಾ ಹೊತ್ತಿನ್ಯಾಗ ಒಂದ ಅಥವಾ ಎರಡು ಪೊಂಡ ಬ್ರೆಡ ತರತ್ತಿದ್ರು. ಮುಂಜೆನೆ ಎದ್ದ ಮಕ್ಕಳ ಎಲ್ಲಾ ಚಹಾದಾಗ ಬ್ರೆಡ ಎದಕೊಂಡ ತಿನ್ನತಿದ್ದುವು. ಸಿರಿಗೆ ಒಳ್ಳೆ ರೆಟ ಸಿಕ್ಕಿದ ವಾರ ಬ್ರೆಡ್ ಕುಂದಾ ಅಲ್ಲದ ಚುಡಾ ಸಹ ತರತ್ತಿದ್ದರು.

ಸಿರಿ ಉದ್ಯೋಗ ಅವಾಗ ಅಷ್ಟೇನ ಲಾಭದ ದಂದೆ ಇರಲಿಲ್ಲ ಕರೆ ಹೇಳಬೇಕಂದರೆ ವರಸಾದಾಗ ಈ ಉದ್ಯೋಗ ೩ ಅಥವಾ ೪ ತಿಂಗಳಾ ಲಾಭಾ ಕೊಡತಿತ್ತು ಉಳಕಿದ ಹೊತ್ತಿನ್ಯಾಗ ಅದರಿಂದಾ ಲಾಭ ಅಷ್ಟಕ ಅಷ್ಟ ಇದಲ್ಲದ ಕರೆಂಟ್ ಕಾಟಾ. ಮಾನ್ಯನ ನೇಕಾರ ದುಡಿಬೆಂದರ ಕರೆಂಟ್ ಇಲ್ಲದಕ್ಕ ಕಾಲಿ ಅಡ್ಯಾಡಿತ್ತಿದ್ದರು. ನಾವು ಸ್ವಲ್ಪ ಮಟ್ಟಿಗೆ ಸ್ಥಿತಿವಂತರು ಹೆಂಗೋ ಜೀವನಾ ನೆಡಿತಿತ್ತು ಆ ದಿನಗೂಲಿ ಮಾಡು ನೇಕಾರರು ಹೆಂಗ ಬಾಳೆ ಮಾಡುತ್ತಿದ್ದವು ಆ ದೇವರಿಗೆ ಗೊತ್ತು.

ಒಮ್ಮೊಮ್ಮೆ ಅಪ್ಪರ ನಮಗ ಓದಲೇ ಮಗನ ಇಲ್ಲಾ ಅಂದರ ಇದ ಹಳದಿ ಸಿರಿ ಘಂಟ ನೀನು ಹೊರಬೆಕ್ಕಕೈತಿ ನೋಡ, ಅಂತ  ನಮಗ ಬೈತ್ತಿದ್ರು ಅವ್ರಿಗೂ ಸಾಲಿ  ಕಲತ ಇಂಜಿನೀರೋ ಅಥವಾ ಡಾಕ್ಟರ್ ಆಗಬೇಕಂತಾ ಅಸೆ ಇತ್ತ  ಆಗಿನ  ಕಾಲದಾಗ ಅಂದ್ರ ೧೯೫೩ ಇಸವಿಯಲ್ಲಿ ಅವರು ಎಸ್ ಎಸ್ ಎಲ್ ಸಿ ಯಾಗ ಗಣಿತಾದಾಗ ನೂರಕ ನೂರಾ ಮಾರ್ಕ್ಸ ತೊಗೊಂಡಿದ್ದರು . ಆದರ ಎಲ್ಲಾರೂ  ಉದ್ದಕ ಸಾಲಿ  ಕಲಕೋತ ಹೋದ್ರ ಮನಿ ನೇಡಿಬೇಕಲ್ಲಾ ಅದಕ್ಕ ನಮ್ಮ ಅಜ್ಜಾ ಸಾಲಿ ಬಿಡಿಸಿ ಮನಿ  ವ್ಯಾಪಾರ ಮಾಡಾಕ ಹಚ್ಚಿದ್ರು ಇವತ್ತಿಗೂ ನಮ್ಮ ಅಪ್ಪರು ಅಂತಿರತಾರ  ನೀವು ಯಾರು ಹತ್ತನೆತ್ತಿನಾಗ ನನ್ನಗತೆ ಗಣಿತನ್ಯಾಗ ನೊರಕ ನೂರು ತೊಗೊಂಡಿಲ್ಲ ಅಂತ.

ಇವಾಗ ನಮ್ಮ ಊರ ಸುರೇಬಾನದಾಗ ಸಿರಿ ಉಧ್ಯಗಾ ಮಾಡೋರ ಕಡಿಮೆ ಆಗ್ಯಾರ ಎಷ್ಟೋ ಮಂದಿ ಊರ ಬಿಟ್ಟಾರ ಇದ್ದವರು ಬೇರೆ ಉದ್ಯೋಗ ಮಾಡಕತ್ಯಾರ. ಹಂತ ಸಿರಿ ನೇಯೋದ ಒಂದ ಕಲೆ ಇದ  ನಶೀಶೆ ಹೋಂಟ್ಯಾತಿ ಇದರ ಬಗ್ಗೆ ಸರ್ಕಾರ ಸಹಾಯ ಮಾಡಿದ್ರ ಈ ಕಲೆ ಉಳಿತೈತಿ.  ಅವರ ಪರಸ್ಥಿತಿ ಸುದಾರಶೀದರ ಸಿರಿ ವ್ಯಾಪಾರ ಮಾಡು ನಮ್ಮ ಹಳ್ಳಿ ಜನಾ ಮನ್ಯಾಗ ರೊಟ್ಟಿ ಪಲ್ಲೆ ಅಣ್ಣಾ ಸಾರು ಜೊತಿ ಕುಂದಾ ಗಿಂದಾ ತೊಗೋಲಾಕ ರೊಕ್ಕಾ ಬರತೈತಿ

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

12 thoughts on “ಮರೆತ ಬೆಳಗಾವಿ ಕುಂದಾ”

  1. we had desire to eat at that time,but no money……. now we have lots of money but have to think twice to eat something. law of nature, if god keeps everybody happy no one will go to temple to worship him. he is selfish and thats why he is playing this game with us. but still we should believe in him and go ahead…………

    1. Life is filled with uncertainty. We can not be modify the events completely but certainly to certain extent we can play our effort to bend events to our convenience.

      Bringing God here whoose existence depends only on belief is way of convincing our self after lost battle.

Leave a Reply

Your email address will not be published. Required fields are marked *