ಬಡವರಿಗೆ ಹೃದಯದ ಸ್ಟೆಂಟುಗಳು ಇನ್ನುಮುಂದೆ ದುಬಾರಿ

ಕೆಲವು ದಿನಗಳ ಮುಂಚೆ ಹೃದಯದ ಸ್ಟೆಂಟುಗಳಿಗೆ 85% ಬೆಲೆ ಕಡಿತಾ ಅಂಥಾ ಎಲ್ಲಾ ದಿನಪತ್ರಿಕೆ , ಟಿವಿ, ಸೋಶಿಯಲ್ ಮಿಡಿಯಾ ದಲ್ಲಿ ಕೇಳಿ ಬಂತು. ಸಾಮನ್ಯ ಜನರು ಒಳ್ಳೆದಾಯಿತು ಅಂತಾ ಅಂದುಕೊಂಡರು. ಆದರೆ ಇದರಿಂದಾ ಸಾಹುಕಾರರಿಗೆ ಹಾಕುವು ಸ್ಟೆಂಟುಗಳ ಬೆಲೆ ಇಳಿಯಿತು ಬಡವರ ಸ್ಟೆಂಟುಗಳು ಹೆಚ್ಚು ದುಬಾರಿಯಾದವು. ಅದು ಹೇಗೆ ಅಂದುಕೊಂಡಿರಾ ಈ ಪ್ರಬಂದವನ್ನು ಓದಿ

ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ತೆಯಾರಾಗುವ ಸ್ಟೆಂಟುಗಳ ಬೆಲೆ ಕಡಿಮೆ. ಇವುಗಳು ಮುಂಚೆ ಆಸ್ಪತ್ರೆಗಳಿಗೆ 15000 ರಿಂದ 18000 ರೂಪಾಯಿಗಳಿಗೆ ದೊರಕುತ್ತಿದವು ಆಸ್ಪೆತ್ರೆಯವರು  ಬಡವರಿಗೆ ಪೂರ್ಣ ಏಂಜಿಯೋಪ್ಲಾಸ್ಟಿ ಪ್ಯಾಕೇಜನ್ನು 65000 ರಿಂದ  70000 ರುಪಾಯಿಗೆ  ಮಾಡುತ್ತಿದ್ದರು.

ಈ ಹೊಸ ರೂಲು ಬಂದಮೇಲೆ ಎಲ್ಲ ಸ್ಟೆಂಟುಗಳು  ಅಸ್ಪ್ರತ್ರೆಗಳಿಗೆ 23000 ಗಿಂತ ಅಧಿಕ ಬೆಲೆಯಾಗಿ  ಕುಳಿತಿವೆ . ಇದರಿಂದ ನಮ್ಮ ಬಡ ರೋಗಿಗಳಿಗೆ ಎಂಜಿಯೋಪ್ಲಾಸ್ಟಿ ಪ್ಯಾಕೇಜ ಬೆಲೆ ಹೆಚ್ಚಿಸಬೇಕಾದ ಅವಶ್ಯಕತೆ ಆಗಿ ಕುಳಿತಿದೆ.

ಪರದೇಶದಿಂದ ಬಂದ ಸ್ಟೆಂಟುಗಳ   ಅಧಿಕವಾದ ಬೆಲೆಯನ್ನು ನಿಯಂತ್ರಿಸುವ ಪರದಾಟದಲ್ಲಿ ನಮ್ಮ ದೆಶೆದಲ್ಲಿ ಕಡಿಮೆ ಬೆಲೆಗೆ ದೂರಕುವ ಸ್ಟೆಂಟುಗಳು ದುಬಾರಿಯಾಗಿ ಕುಳಿತಿವೆ.

ನಿಜವಾಗಿ ಹೇಳಬೇಕೆಂದರೆ ಸ್ಟಾರ ಆಸ್ಪತ್ರೆಗಳಲ್ಲಿ ಸಾಹುಕಾರರು ಆಸ್ಪತ್ರೆಯ ಬಿಲ್ಲಿನಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲಾ ಅಲ್ಲಿ ಬೆಲೆ ಕಡಿಮೆಮಾಡಿ ಬಡವರರಿಗೆ ದುಬಾರಿ ಮಾಡುವ ಈ ಹೊಸ ರೂಲು ಸರಿಯಾದುದಲ್ಲಾ.  ಇದು ಪೂರ್ವಯೋಜಿತವೊ  ಅಥವಾ ಈ ಹೊಸ ರೂಲಿನಿಂದ ಆದ ಅಡ್ಡ ಪರಿಣಾಮವೂ ನನಗೆ ಗೊತ್ತಾಗುತ್ತಿಲ್ಲಾ. ಅದೇ ಏನೆ ಇದ್ದರು ನಮ್ಮ ಸರ್ಕಾರ ಬೇಗ ಎಚ್ಚೆತ್ತು ಇದನ್ನು  ಸರಿಪಡಿಸಬೇಕು  ಇಲ್ಲದಿದ್ದರೆ ಬಡವರಿಗೆ ತುಂಬಾ ಮೋಸವಾಗುತ್ತದೆ

ಇದನ್ನು ಸರಿಪಡಿಸದಿದ್ದರೆ ನಮ್ಮ ಸರ್ಕಾರ ಅಕ್ರಮ ವೆವಹಾರಗಳಿಗೇ ಕುಮ್ಮಕ್ಕು ಕೊಟ್ಟಂತಾಗುತ್ತದೆ.

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

4 thoughts on “ಬಡವರಿಗೆ ಹೃದಯದ ಸ್ಟೆಂಟುಗಳು ಇನ್ನುಮುಂದೆ ದುಬಾರಿ”

   1. Sir,When govt has fixed angioplasty procedure fee also,why private hospital increases fee & If at all if do so it’s unfair know sir.

    1. I am doing most angioplasty less than one lac voluntarly

     Government has not put restrictions on angioplasty charges.

Leave a Reply

Your email address will not be published. Required fields are marked *