ಪ್ರೊಪೆಸರ ಡಾ|| ಬಿ ಎಮ್ ಹೆಗ್ಗಡೆ ಅವರಿಗೆ ತೆರದ ಅಂಚೆ,

ಮಾನ್ಯನನ್ನ ಗುರುಗಳ ಗುರುಗಳಾದ
Dr B. M Hegade ಅವರೆ 
ತಾವುಹಿರಿಯರು ಮತ್ತು ಮಹಾ ಚಿಂತಕರು. ತಾವು ನನ್ನ ಗುರುಗಳ ಗುರುಗಳು. ತಮ್ಮ ಬಗ್ಗೆ ವೈದ್ಯಕಿಯ ಕ್ಶೆತ್ರದಲ್ಲಿ ಸಾಕಸ್ಟ ಒಳ್ಳೆಯ ಹೆಸರು ಇದೆ. ಇತ್ತಿಚಿಗೆ ನನಗೆ ನನ್ನ ಒಂದು ರೋಗಿ ತಾವ ದೂರದರ್ಶನದಲ್ಲಿ ಸಂರ್ದರಶನ ನೀಡಿದ ಒಂದು ಕಾರ್ಯಕ್ರಮವನ್ನು ನನ್ನ ಮೂಬೈಲ ಪೊನಿಗೆ ವಾಟ್ಸೆಪ ಮುಲಕ ಕಳುಹಿಸಿಕೊಟ್ಟಿರುವರು. ಅದನ್ನು ನೊಡಿದ ಮೇಲೆ ನನಗೆ ಕೆಲವೋಂದು ವಿಷಯಗಳ ಬಗ್ಗೆ ಬಹಳ ತಪ್ಪುನ್ನು ತಾವು ಹೆಳುತ್ತಿರುವಿರಿ ಎಂದು  ಅನಿಸುತ್ತಿದೆ.

ಇವತ್ತಿನದಿನ ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣ ಕೊಂಡ ಬಗ್ಗೆ ತಾವು ಹೆಳುತ್ತಿರುವುದು ನನಗೆ ಅಸತ್ಯವೆನಿಸುತ್ತಿಲ್ಲಾ. ವ್ಯಾಪರಿಕರಣ ಎಕೆ ಆಗುತ್ತಿದೆ ಎಂಬುದನ್ನು ನಾನು ತೆರೆದೆ ಅಂಚೆಯಲ್ಲಿ ಬರೆಯುತ್ತಿಲ್ಲ, ನಾನು ತೆರೆದೆ ಅಂಚೆಯಲ್ಲಿ ರೋಗಗಳ ಬಗ್ಗೆ ಮತ್ತು ಅವುಗಳ ಉಪಚಾರಗಳ ಬಗ್ಗೆ ತಾವು ಹೇಳುತ್ತಿರುವುದು  ಸರಿಅಲ್ಲ ಎಂದು ಅನಿಸುತ್ತಿದೆ. ತಾವು ಹೀಗೆ ತಪ್ಪಾಗಿ ಸಂದರ್ಷಣ ನೀಡಿದರೆ ಅದು ನಮ್ಮ ಜನಕ್ಕೆ ಓಳ್ಳಯದಾಗುವದಿಲ್ಲ ಎಂದು ನನ್ನ ಅನೀಸಿಕೆ.

). ತಾವು ಹೇಳ್ಳಿದ್ದು ಆಸ್ಪತ್ರೆಗಳ್ಳಲ್ಲಿ ಐಸಿಯು ಇರಕೂಡದು ಎಂದು. ಇದನ್ನು ಹೇಗೆ ಒಪ್ಪಿಕೊಳ್ಳಬೇಕು, ನೀವೆ ಹೇಳಿ?. ಕೇಲವು ವರ್ಷಗಳ ಹಿಂದೆ ಆಸ್ಪತ್ರೆಗಳ್ಳಲ್ಲಿ ಐಸಿಯು ಇಲ್ಲದ ಕಾಲದಲ್ಲಿ ಹೃದಘಾತವಾದ ರೋಗಗಳ ಮರಣ ವಾಗುವ ಸಂಭವ ಹೇಚ್ಚಿತ್ತೆಂದು ಸಾಭೀತಾದ ವಿಷಯ ಇದನ್ನು ತಾವು ತಮ್ಮ ವೃತ್ತಿಯ ಅವದಿಯಲ್ಲಿ ತಮ್ಮ ಶೀಷ್ಯಂದಿರಿಗೆ ಕಲಿಸಿರಬಹುದು. ತಾವು ತಮ್ಮ ಸಂದರ್ಷಣದಲ್ಲಿ ಹೀಗೆ ಹೇಳಿದರೆ ಐಸಿಯು ಅವಸ್ಯವಿರುವ ರೋಗಿಗಳಿಗೆ ಉಪಚಾರ ಮಾಡುಲು ವೈದ್ಯರಿಗೆ ತುಂಬಾ ತೋಂದರೆಯಾಗುತ್ತದೆ. ಕೇಲವು ವೈದ್ಯರು ಅನವಸ್ಯವಾಗಿ ರೋಗಿಗಳನ್ನು ಐಸಿಯುನಲ್ಲಿ ಇಡುತ್ತಾರೆ ಇದನ್ನು ನಾನು ಬಲ್ಲೆ, ಆದರೆ ಐಸಿಯು ಬೇಡಾ ಎಂಬ ವಾದ ಸರಿಯಲ್ಲ.
).ಅಮೆರಿಕದ ಕೊರಿಯನ ಯುದ್ದದಲ್ಲಿ ಮರಣ ಹೊಂದಿದ ಸೈನಿಕರ ಹೃದಯದಲ್ಲಿ ಇದ್ದ ಬ್ಲಾಕು ಗಳ ಬಗ್ಗೆ, ತಾವು ಹೇಳಿದ್ದು: ಮರಣ ಹೊಂದಿದ ಸೈನಿಕರಲ್ಲಿ  ಎಂಜೋಗ್ರಾಮಮಾಡಿದಾಗ 77% ಯುವಕರಲ್ಲಿ ಬ್ಲಾಕು ಇತ್ತು ಎಂದು. ಮರಣ ಹೊಂದಿದ ಮೇಲೆ ಎಂಜೋಗ್ರಾಮ ಮಾಡಲು ಯಾರಿಗಾದರು ಬರುತ್ತದಾ ತಾವೆ ಹೇಳಿ? ಮಿಡಿತವನ್ನು ನಿಲ್ಲಿಸದ ಹೃದಯದ ಮೇಲೆ ಹೇಗೆ ಎಂಜೊಗ್ರಾಮ ಮಾಡಲು ಸಾದ್ಯ. ಅದ್ಯಯನದಲ್ಲಿ ಮರಣಾಂತರ ಪರಿಕ್ಷೆ ಮಾಡಲಗಿತ್ತು ಎಂಜೊಗ್ರಾಮ ಅಲ್ಲ, ಅದರಲ್ಲಿ ಕಂಡು ಬಂದ್ದಿದೆನೆಂದರೆ ಕೋರೊನರ ರಕ್ತನಾಳಗಳ ಗೋಡೆಗಳಲ್ಲಿ ಸ್ವಲ್ಪ್ ಮಟ್ಟಿಗೆ ದಪ್ಪವಾಗಿರುವುದು ಎಂದು, ಮುಂದೆ ಇವು ಬ್ಲಾಕುಗಳಾಗಬಹುದಾ ಎಂಬ ಸಂದೆಹ ಅಸ್ಟೆ. ತಾವು ಇದನ್ನು ಜಿವಂತವಿರುವ ಮನುಷರಲ್ಲಿ ಮಾಡುವ ಎಂಜೊಗ್ರಾಮಿಗೆ ಹೋಲಿಸುವುದು ತಪ್ಪಗುತ್ತದೆ. ಕೇಲವು ವೈದ್ಯರು ಅನ್ವವೈಸ್ಯವಾಗಿ ಎಂಜಿಯುಗ್ರಾಮ ಮಾಡುತ್ತಾರೆ ಎಂದು ನಾನು ಬಲ್ಲೆ.
). ಹೃದಯದ ರಕ್ತನಾಳಗಳ್ಳಲ್ಲಿ ಬ್ಲಾಕುಗಳಿರುವುದು ಒಳ್ಳೆಯದು ಎಂದು ತಾವು ಹೇಳಿರುತ್ತಿರಿ. ಇದಕ್ಕೆ ತಾವು ನೀಡುವ ಕಾರಣ ಎನೆಂದರೆ ಹೃದಯಘಾಥವಾದರೆ ಬ್ಲಾಕು ಇದ್ದವರು ಬದಿಕುಳಿಯುವ ಸಾದ್ಯತೆ ಹೆಚ್ಚು ಎಂದು. ತಾವು ಕೋಡವ ಕಾರಣಕ್ಕೆ ಒಂದು ಹೊಲಿಕೆ ಕೊಟ್ಟು ನನ್ನ ಪ್ರತಿವಾದ ವಿವರಿಸಬೇಕೆಂದು ಅನಿಸುತ್ತಿದೆ, ಅದೇನೆಂದರೆ ಕಾಲು ಮುರಿದ ವೈಕ್ತಿಗಳಿಗೆ ರಸ್ತೆ ಅಪಘಾತ ಆಗುವ ಸಂಬವ ಕಡಿಮೆ, ಅದಕ್ಕಾಗಿ ಎಲ್ಲರ ಕಾಲು ಮುರಿಯೆಬೆಕು”, ಇದನ್ನು ಯರದರು ಉಪ್ಪುತ್ತಾರ ಹೇಳಿ. ಹೀಗೆ ತಾವು ತಪ್ಪು ತಪ್ಫಾಗಿ ಜನರಿಗೆ ಹೇಳಿಕೊಟ್ಟರೆ, ಜನ ತಮ್ಮ ಜೀವನಶೈಲಿಯನ್ನು ಇನಸ್ಟು ಹಾಳು ಮಾಡಿಕೋಳ್ಳುತ್ತಾರೆ, ಮತ್ತು ಹೆಚ್ಚು ಹೆಚ್ಚು ಜನರು ಹೃದಯದ ಕಾಯಿಲೆಗೆ ತುತ್ತಾಗುತ್ತರೆ.
ನನ್ನಅನಿಸಿಕೆಗಳ್ಳನ್ನು ತೆರೆದ ಅಂಚೆಯಲ್ಲಿ ಬರೆದಿದ್ದೇನೆ ತಾವು ಹಿರಿಯರು ನನ್ನನ್ನು ತಫ್ಫಾಗಿ ತಿಳಿದುಕೊಳ್ಳಬೇಡಿ. ಓಮ್ಮೊಮ್ಮೆ ನನಗೆ ಅನಿಸುತ್ತೆ ತಾವು ತಮ್ಮ ವಿಚಾರಗಳ್ಳನ್ನು ಸಂರ್ಪೂಣವಾಗಿ ಸಂದರ್ಷಣದಲ್ಲಿ  ಹೇಳಿಕೊಳ್ಳಲಾಗಲ್ಲಿಲ್ಲಾ. ಅದಕ್ಕಾಗಿ ಮೇಲಿನ ತಪ್ಪುಗಳು ಆಗಿರಬಹುದೆಂದು.
ಇಂತಿತಮ್ಮಶಿಷ್ಯಯಂದರಶಿಷ್ಯ

ಡಾ|| ಉಮೇಶ ರಾ ಬೀಳಗಿ
ಹುಬ್ಬಳ್ಳಿ

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

2 thoughts on “ಪ್ರೊಪೆಸರ ಡಾ|| ಬಿ ಎಮ್ ಹೆಗ್ಗಡೆ ಅವರಿಗೆ ತೆರದ ಅಂಚೆ,”

  1. Your article focuses on medical issues. but what about malpractices, does it mean they are not there.
    I know Dr B M Hegede read few of his books too. he is not totally wrong.

Leave a Reply

Your email address will not be published. Required fields are marked *