ಪೋಸ್ಟ ಕಾರ್ಡ, ಇನ್ಲ್ಯಾಂಡ್ ಪತ್ರ ಮತ್ತು ಸ್ಟ್ಯಾಂಪ್ ಹಚ್ಚಿದ ಪ್ಯಾಕೆಟ್

ಅವತ್ತು ಆಸ್ಪತ್ರೆಯಿಂದಾ ಮನೆಗೆ ಬಂದೆ. ನನ್ನ ಸಣ್ಣ ಮಗಳು ಪೋಸ್ಟ ಕಾರ್ಡ ಮತ್ತು  ಇನ್ಲ್ಯಾಂಡ್ ಪತ್ರಗಳನ್ನು ಹಾಸಿಗೆ ಮೇಲೆ ಹರಡಿದ್ದಳು. ಏನೇ ಇದು, ಇವನ್ನು ಎಲ್ಲಿಂದಾ ತಂದೆ ಅಂದೆ. ಅದಕ್ಕೆ ಅಲ್ಲೇ ಪಕ್ಕದಲ್ಲಿ ಇದ್ದ ನನ್ನ ಹೆಂಡತಿ ಅದು ಅವಳ ಹೋಂವರ್ಕ್ ಎಂದು ಉತ್ತರ ಕೊಟ್ಟಳು. ಓ ಓಕೆ, ಎಂದು ತೇಪ್ಪಗಾದೆ.

ನನಗೆ ಟಿವಿ ರಿಮೋಟ್ ಬೇಕಿತ್ತು ಅದು ನನ್ನ ಮಗಳ ಬಾಜು ಇತ್ತು. ನಾನು ಮೆಲ್ಲಗೆ ಟಿವಿ ರಿಮೋಟಿಗಾಗಿ ಕೈ ಚಾಚಿದೆ. ಇದನ್ನು ಗಮನಿಸದ  ಪುಟ್ಟಿ ರಿಮೋಟನ್ನು ಪಟ್ಟನೆ ತನ್ನ ಕೈಯಲ್ಲಿ ಹಿಡುಳೊಂದಳು. ನಾನು ಆಯಿತು ಬಿಡು ಎಂದು, ಟಿವಿಯಲ್ಲಿ ಬರುತ್ತಿದ್ದ ಡೋರೆಮಾನ್ ವಿಧಿಯಿಲ್ಲದೆ ನೋಡುತ್ತಾ ಕುಳಿತೆ.

ಸ್ವಲ್ಪ ಹೊತ್ತಿನ ಮೇಲೆ ನನ್ನ ಕಣ್ಣು ಪೋಸ್ಟ ಕಾರ್ಡ ಮತ್ತು ಇನ್ಲ್ಯಾಂಡ್ ಪತ್ರಗಳ ಮೇಲೆ ಹರಿಯಿತು. ಡೋರೆಮಾನ್ ಮತ್ತು ನೊಬಿತಾ ಟೈಮ್ ಮಷೀನ್ ತೆಗೆದುಕೊಂಡು ಗತಕಾಲಕ್ಕೆ ಹೋದಹಾಗೆ ನನ್ನ ಮನಸ್ಸು ಗತಕಾಲಕ್ಕೆ ಹೋಯಿತು.

ಬದಲಾದ ದಿನಗಳು.

ಪೋಸ್ಟ್ ಕಾರ್ಡ, ಇನ್ಲ್ಯಾಂಡ್ ಪತ್ರ ಮತ್ತು ಸ್ಟ್ಯಾಂಪ್ ಹಚ್ಚಿದ ಪಾಕೆಟ್ ಬರೆದು ಅದೆಷ್ಟೋ ವರ್ಷ ಆಯಿತರಿ.  ಈಗ ಇಮೇಲ್, ಮೊಬೈಲ್  ಮತ್ತು ವಾಟ್ಯಾಪ್ಪ್ಬ ಬಂದ ಮೇಲೆ ಆ ಹಳೆ ಕಾಲದ ಕ್ಲಾಸಿಕ್  ಪತ್ರ ಬರೆಯೋದು ಮರತೇ ಹೋಗಿದೆ ಅನಿಸುತ್ತಿದೆ. ಈಗ ಅದೇನೆಂದರೆ ಪಟ್ಟನೆ ಮೊಬೈಲ್ ತೆಗುದು ಫೋನ್ ಮಾಡೋದೇ ಸಾಮಾನ್ಯವಾಗಿದೆ. ಕಚೇರಿಯ ಕೆಲಸಕಷ್ಟೆ ಪತ್ರ ಬರಿಯೋದ, ಉಳಿದದೆಲ್ಲಕ್ಕೆ ಮೊಬೈಲ್, ಮತ್ತು ಹೇಳಬೆಕೆಂದರೆ ಕಚೇರಿಯ ಕೆಲಸಕ್ಕೂ ಇಮೇಲ್ ಸಹ ಬಂದಿದೆ, ಇನಸ್ಟು ದಿನ ಆದ ಮೇಲೆ ಪತ್ರ ಬರಿಯೋದು ಪೂರ್ತಿಯಾಗಿ ಮರಿತು ಹೋಗಬಹುದು.

ಆವಾಗಿನ ಪತ್ರದ ಒಂದಿಷ್ಟು ವಿಶೇಷತೆಗಳು.

  1. ಪತ್ರದಲ್ಲಿ ಪ್ರಾರಂದಲ್ಲಿ ತಂದೆ ತಾಯಿ ಅಥವಾ ಹಿರಿಯರಿಗೆ ಪೂಜ್ಯರೇ ಅಂಥ ಬರಿಯುವುದು ಇವತ್ತಿನ ಇಮೇಲ್ನಲ್ಲಿ ಎಲ್ಲಿ ಇದೆ ಹೇಳಿ.  ಹೆಚ್ಚಾಗಿ ಇಮೇಲ್ ಇಂಗ್ಲಿಷ್ನಲ್ಲೇ ಬರಿಯುತ್ತೆವೆ, ಆದುದರಿಂದ ಪೂಜ್ಯರೇ ಇತ್ಯಾದಿ ಶಬ್ದಗಳು ಮರತೇ ಹೋದಹಾಗೆ ಅನಿಸುತ್ತಿದೆ.
  2. ಆಮೇಲೆ ಯೋಗಕ್ಷೇಮ ಬಗ್ಗೆ ಇರುತ್ತಿತ್ತು ಉದಾಹರಣೆಗೆ ಇತ್ತ ಎಲ್ಲರ ಅರೋಗ್ಯ ಚನ್ನಾಗಿದೆ ಅಲ್ಲಿ ಎಲ್ಲರ ಅರೋಗ್ಯ ಚನ್ನಾಗಿದೆ ಎಂದು ಬಯುಸುತ್ತೇನೆ.  ಇವತ್ತು ಕ್ಷಣರ್ದದಲ್ಲಿಆಗುವ ಸಂವಹನೇ, ಹಿಂತ ಅನಿಸಿಕೆ ಹಾಗು ಉಹೆಗಳು ಅಷ್ಟು ಸಮಂಜಸ ಅನಿಸುವುದಿಲ್ಲಾ.
  3. ಪತ್ರದಲ್ಲಿ ಕೊನೆಗೆ ಮರಳಿ ಪತ್ರ ಬರೆಯಿರಿ ಎಂದು ಕೇಳುವುದು ರೂಢಿಯಾಗಿತ್ತು. ಅವಾಗ ಅಂಚೆ ಪತ್ರ ಮುಖ್ಯವಾದ ಸಂವಹನ ಮಾರ್ಗವಾಗಿತ್ತು. ಆದುದರಿಂದಾ ಮರಳಿ ಪಾತ್ರಕ್ಕಾಗಿ ಕಾಯುವುದು ಅನಿವಾರ್ಯವಾಗಿತ್ತು. ಇವತ್ತಿನ ದಿನದಲ್ಲಿ ಮರಳಿ ಪತ್ರ ಬರೆಯಿರಿ ಎಂದು ಕೇಳುವುದು ಅಷ್ಟು ಸಮಂಜಸ ಅನಿಸುವುದಿಲ್ಲಾ.

ಮುದೊಂದು ದಿನ?

ಅದಾವುದೋ ಇಂಗ್ಲಿಷ್ ಚಲನ ಚಿತ್ರದಲ್ಲಿ ನೋಡಿದ ನೆನಪು. ಚಲನ ಚಿತ್ರದ ಹೆಸರು ನೆನಪಿಗೆ ಬರುತಿಲ್ಲಾ. ಅಣು ಯುದ್ದ ಆದದಿನಗಳ ನಂತರ ಕಥೆ ಅದು. ಈಗಿರುವ ಎಲ್ಲ ಸಂವಹನಾ ಮಾರ್ಗ ಅಲ್ಲಿ ಇರುವುದಿಲ್ಲ. ಆದುದರಿಂದ ಅರಾಜಕತೆ ಎಲ್ಲಡೆ ತಾಂಡವಾಡುತಿರುತ್ತದೆ. ಈ ಕಥೆಯಲ್ಲಿ ಮರಳಿ ಅಂಚೆಕಚೇರಿ ಪ್ರಾಂಭಿಸಿ ದೇಶವನ್ನು ಮರಳಿ ಕಟ್ಟುತ್ತಾರೆ. ಈ ಕಥೆ ಮನಕುಲಕ್ಕೆ  ಸಂವಹನೆ ಮಾರ್ಗ ಅಂಚೆ ಎಷ್ಟು ಅವಶ್ಯ  ಯಂಬುದನ್ನು ಮರಳಿ ಅರಿವು ಮಾಡಿಕೊಡುತ್ತದೆ.

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

Leave a Reply

Your email address will not be published. Required fields are marked *