ಪೇರಿಪಾರಟಮ್ ಕಾರ್ಡಿಯೊಮಯೋಪತಿ .

ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ  ಕಾಯಿಲೆ. ಈ ಕಾಯಿಲೆ ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000  ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆ ಕಾಣುವುದು ತುಂಬು ಗರ್ಭಿಣಿಯಲ್ಲಿ, ಮತ್ತು ಮಗು ಜನನವಾದು ಮೇಲೆ 6 ತಿಂಗಳವರೆಗೆ ತಾಯಿಗೆ ಈ  ಕಾಯಿಲೆ ಬರಬಹುದು. ಹೃದಯ ರಕ್ತವನ್ನು  ಒತ್ತಿ ನೂಕುತ್ತದೆ, ಈ ಕಾಯಿಲೆಯಲ್ಲಿ ಹೃದಯದ ಒತ್ತಿ ನೂಕುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ

ಹೃದಯದ ಒತ್ತಿ ನೂಕುವ ಸಾಮರ್ಥ್ಯವನ್ನು ಎಜೆಕ್ಷನ್ ಪ್ರಾಕ್ಸನ್ ಎಂಬ ಮಾಪನದಿಂದ ಅಳೆತೆಮಾಡುತ್ತಾರೆ, ಈ ಮಾಪನ ಮಾಡಲು ಎಕೊಕಾರ್ಡಿಯೋಗ್ರಫಿ ಎಂಬ ಯಂತ್ರ ಬೇಕಾಗುತ್ತದೆ. ಎಜೆಕ್ಷನ್ ಪ್ರಾಕ್ಸನ್ ರೋಗವಿಲ್ಲದವರಲ್ಲಿ 50 ರಿಂದ 70% ಇರುತ್ತದೆ, ಈ ಕಾಯಿಲೆ ಇದ್ದವರಲ್ಲಿ ಇದು ಕಡಿಮೆ ಆಗುತ್ತದೆ. 
ಈ ಕಾಯಲೆಯ ಲಕ್ಸಣಗಳು ಯಾವವೆಂದರೆ, ಉಸಿರಾಟ ತೊಂದರೆ,  ಹೆಚ್ಚು ಸುಸ್ತು ಆಗುವುದು,  ಹೃದಯ ಡವಡವ ಅನಿಸುವುದು ಮತ್ತು ಎದೆ ನೋವು. ಈ ಕಾಯಿಲೆ ಸಾಮಾನ್ಯವಾಗಿ ಮಗು ಜನನವಾದ ಮೇಲೆ ಗುಣಮುಖಗೊಳ್ಳುತ್ತದೆ, ಕೆಲವೊಮ್ಮೆ ಹೃದಯದ ಒತ್ತಿ ನೂಕುವ ಸಾಮರ್ಥ್ಯ ಸಮರ್ಪುಣವಾಗಿ ಗುಣವಾಗುವದಿಲ್ಲ . ಈ ಕಾಯಿಲೆ ಬಂದವರು ಮುಂದೆ ಮತ್ತೆ ಗರ್ಭಿಣಿಯಾದರೆ ಇದು ಮತ್ತೆ ಮರಕಳಿಸುತ್ತದೆ, ಹಾಗೆ ಮರಕಳಿಸಿದ ಕಾಯಿಲೆ ಮೊದಲಿಗಿಂತ ತೀರ್ವವಾಗಿರುತ್ತದೆ, ಆದುದರಿಂದ ವೈದ್ಯರು ಭವಿಷ್ಯದಲ್ಲಿ ಗರ್ಭಿಣಿಯಾಗದಿರಲು ಸಲಹೆ ನೀಡುತ್ತಾರೆ. 
ಈ ಕಾಯಿಲೆಗೆ ವೈದ್ಯರು ಮಾತ್ರೆಗಳನ್ನು ಕೊಡುತ್ತಾರೆ. ಅವು ಯಾವವೆಂದರೆ diuretics, betablockers ಮತ್ತು digoxin. ACE inhibitors ಗರ್ಭಿಣಿಯರಿಗೆ ನೀಡುವಹಾಗಿಲ್ಲಾ. 
ಹೃದಯದ  ಒತ್ತಿ ನೂಕುವ ಶಕ್ತಿ ತುಂಬಾ ಕುಂಠಿತಗೊಂಡಿದ್ದಾರೆ ಅದಕ್ಕೆ ventricular assist device ಎಂಬ ಉಪಕರಣವನ್ನು ರೋಗಿಗೆ ಜೋಡಿಸುತ್ತಾರೆ, ಈ ಉಪಕರಣ ತುಂಬಾ ದುಬಾರಿ, ಈ ಉಪಕರಣ ಸಾಮಾನ್ಯವಾಗಿ ರೋಗಿಯ ಹೃದಯ ತನ್ನ ಒತ್ತಿ ನೊಕವ ಶಕ್ತಿಯನ್ನು ಗುಣಮುಖವಾದ ಮೇಲೆ ರೋಗಿಯಿಂದ ಕಳಚುತ್ತಾರೆ . 

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

Leave a Reply

Your email address will not be published. Required fields are marked *