ನಾವು ಮರೆತ ಆಕಾಲಿನ ಸಿವನಬುಟ್ಟಿ ಇಗೊ ನೋಡಿ ಇವಾಗಿನ ಆಕಾಶಬುಟ್ಟಿ.

ಆಕಾಶಬುಟ್ಟಿ ಅಥವಾ ಸಿವನಬುಟ್ಟಿಯನ್ನು ದಿಪಾವಳಿಯಂದು ಮನೆಯಮುಂದೆ ಕಟ್ಟುವ ರೂಡಿ ನಮ್ಮಲ್ಲಿ ಉಂಟು. ಆದರೆ ಇದು ಈ ನಾಲವತ್ತು ವರ್ಷದಲ್ಲಿ ತುಂಬಾ ಬದಲವಣೆ ಆಗಿದೆ. ಈ ಪ್ರಬಂದ ಆವಾಗಿನ ಸಿವನಬುಟ್ಟಿ ಅಥವಾ ಇವಾಗಿನ ಆಕಾಶಬುಟ್ಟಿ ಬಗ್ಗೆ ಇರುತ್ತದೆ.

ನನ್ನ ಚಿಕ್ಕ ಮಗಳ ಏರಡನೆ ತರಗತಿಯಲ್ಲಿ ಓದುತ್ತಿದ್ದಾಳೆ, ಅವಳ ಶಾಲೆಯಲ್ಲಿ ಇವತ್ತು ಏರಡು ಆಕಾಶಬುಟ್ಟಿಯನ್ನು ತರಲು ಹೇಳಿದ್ದರಿಂದ ನಾನು ಆಂಗಡಿಗೆ ಅವಳ್ಳನ್ನು ಕರೆದುಕೊಂಡು ಹೊದೆ. ಅಲ್ಲಿಯ ಆಕಾಶಬುಟ್ಟಿಯನ್ನು ನೊಡಿದಾಗ ನನಗೆ ಈ ಪ್ರಭಂದ ಬರೆಯಲು ಯೋಚನೆ ಬಂತು. ಅವರ ಶಾಲೆಯವರು ಎಲ್ಲ ಮಕ್ಕಳಿಂದ ಬಂದ ಎರಡೆರಡು ಆಕಾಶಬುಟ್ಟಿಯನ್ನು ತಗೆದುಕೊಂಡು ಅದೇನು ಮಾಡುತ್ತಾರೊ ನನಗಂತು ತೀಳಿಯುತ್ತಿಲ್ಲಾ. ಆದರೆ ಈ ಪ್ರಭಂದ ಅವರ ಶಾಲೆಯವರ ಬಗ್ಗೆಯೂ ಅಲ್ಲಾ

ಆಕಾಶಬುಟ್ಟಿ ಅಥವಾ ಸಿವನಬುಟ್ಟಿ ಅಂದರೆನು.

ನಾವು ಚಿಕ್ಕವರಿದ್ದಾಗ ಆಕಾಶಬುಟ್ಟಿ ಅಂದರೆ ಗಾಳಿಯಲ್ಲಿ ತೆಲಿಬಿಡುವ ಬುಟ್ಟಿ. ಇದ್ದನ್ನು ದೊಡ್ಡದೊಂದು ಹಾಳಿಗೆ, ತೆರೆದ ಗೊಣಿಚೀಲದ ರುಪ ಕೊಟ್ಟು, ಇದರ ತೆರದ ಬಾಗಕ್ಕೆ  ಬಿದಿರುನಿಂದ ಗುಂಡಾದ ಪ್ರೇಮ್ ಮಾಡಿ,  ಅದನ್ನು ಉಲ್ಟಾ ಮಾಡಿ ಅದರಲ್ಲಿ  ಉರಿಯುವ  ದೀಪ ಹಚ್ಚುತ್ತಿದ್ದರು. ಇದನ್ನು ಹಾರಿ ಬೀಡುವ ಮುಂಚೆ ಬೆಂಕಿ ಹಚ್ಚಿ ಅದರಲ್ಲಿ ಬಿಸಿ ಗಾಳಿಯನ್ನು ತುಂಬುತ್ತಿದ್ಡರು.  ಈ ಹಾರಿ ಭಿಡುವ ಆಕಾಶಬುಟ್ಟಿಯಿಂದ ಆದ ಗಂಡಾತರಗಳು ಕಡಿಮೆಯೆನ್ನಲ್ಲಾ. ಓಮ್ಮೊಮ್ಮೆ ಇವು  ಭಣವೆ ಅಥಾವ ಗುಡಿಸಲ ಮೆಲೆ ಬಿದ್ದು ಬೆಂಕಿ ಹತ್ತಿದ್ದ ಸಣ್ಣಿವೇಸಗಳು ಉಂಟು. ಆದರೆ ಇವಾಗ ಆಕಾಶಬುಟ್ಟಿ ಅಂದರೆ ಅದನ್ನು ಮನೆಗೆ ಮುಂದೆ ಕಟ್ಟವ ಬುಟ್ಟಿ. ಇದನ್ನು ನಾವು ಸಿವನಬುಟ್ಟಿ ಎಂದು ಕರೆಯುತ್ತಿದ್ದೆವು.

ಇವಾಗಿನ ಆಕಾಶಬುಟ್ಟಿ
ಇವಾಗಿನ ಆಕಾಶಬುಟ್ಟಿ

ಅದೊಂದು ಕಾಲ, ದಿಪಾವಳಿ ಬಂದಾಗ ಏಲ್ಲರ ಮನೆಯಮುಂದೆ ಸಿವನಬುಟ್ಟಿ ನೆತಾಡುತ್ತಿತ್ತು, ಆಗ ಎಲ್ಲ ಹಳ್ಳೀಯಲ್ಲಿ ಹೆಚ್ಚಾಗಿ ಮನೆಯಲ್ಲಿ ತಯಾರಗೊಂಡ ಸಿವನಬುಟ್ಟಿ ಮನೆಯ ಮುಂದೆ ನೆತಾಡುತ್ತಿದ್ದವು. ಈ ಸಿವನಬುಟ್ಟಿ ತಯಾರ ಮಾಡುವುದು ಅವಾಗಿನ ಯುವಕರಿಗೆ ಒಂದು ಬಹಳ ಹುಮ್ಮಸದ ಕೇಲಸ. ಈ ಸಿವನಬುಟ್ಟಿ ಮಾಡಲು ಬಿದಿರು ಉಪಯೊಗ ಮಾಡುತ್ತಿದ್ದರು. ಸಣ್ಣ ಸಣ್ಣ ಬಿದಿರು ತೆಗೆದುಕೊಂಡು ಅದರಿಂದ ಫ್ರೇಮ್ ಮಾಡುತ್ತಿದ್ದರು. ಅದರ ಮೇಲು ಪಾರದರ್ಶಕ ಹಾಳಿಯನ್ನು ಹಚ್ಚಿ ಅದರ ತೆಳ ಬಾಗ್ಗಕ್ಕೆ ಹಾಳಿಯಿಂದ ಜುಲಾ ಕಟ್ಟುತ್ತಿದ್ದರು. ಹಿಗೆ ಸಿಂಗರಿಸದ ಸಿವನಬುಟ್ಟಿ, ವಿದ್ಯುತ ಬಲ್ಬುನಿಂದ  ಎಲ್ಲರ ಮನೆಯಮುಂದೆ ಬೆಳಗುವ ದೃಶ್ಯ ಬಹಳ ಚನ್ನಾಗಿರುತ್ತಿತ್ತು.

ಬಿದುರಿನಿಂದ ಮಾಡಿದ ಸಿವನಬುಟ್ಟಿ ಈ ರೂಪದಲ್ಲಿ ಇರುತ್ತಿತ್ತು
ಬಿದುರಿನಿಂದ ಮಾಡಿದ ಸಿವನಬುಟ್ಟಿ ಈ ರೂಪದಲ್ಲಿ ಇರುತ್ತಿತ್ತು

ಆಗ ಅಂಗಡಿಯಲ್ಲಿ ಸಿಗುವ ಸಿವನಬುಟ್ಟಿ ನಕ್ಷತ್ರ ಆಕಾರದಲ್ಲಿ ಇರುತ್ತಿದ್ದವು. ನನಗೆ ತಿಳಿದ ಹಾಗೆ, ಈ ನಕ್ಷತ್ರ ಆಕಾರದ ಸಿವನಬುಟ್ಟಿ ಕ್ರಿಸಮಸ್ ಹಬ್ಬದಲ್ಲಿ ಉಪಯೂಗಿಸುವ ಬುಟ್ಟಿಯನನ್ನೆ ಅಂಗಡಿಯವರು ದಿಪಾವಳಿಯಂದು ಮಾರುತ್ತಿದ್ದಿರಬೇಕು. ಆದರೆ ಇವಾಗ ಎಲ್ಲರ ಮನೆಯಲ್ಲಿ ಸಿವನಬುಟ್ಟಿಯನ್ನು ಅಂಗಡಿಯಿಂದ ಕರಿದಿಸಿ ಉಪಯೊಗಿಸುವದರಿಂದ ನಕ್ಷತ್ರ ರುಪವಲ್ಲದೆ ಬೆರೆ ಬೆರೆ ರುಪ ಪದ ಸಿವನಬುಟ್ಟಿ ಅಂಗಡಿಗಳಲ್ಲಿ ಸಿಗುತ್ತವೆ.

Author: Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

Leave a Reply

Your email address will not be published. Required fields are marked *