ಅಳುವುದೊ ನಗುವುದೊ ನೀವೆ ಹೆಳಿ,

ನನಗೆ ನವಂಬರ  ತಿಂಗಳ್ಳಲ್ಲಿ ನೆಡೆದೆ ಘಟನೆ ಗಳನ್ನು ನಂಬಲು ಆಗುತ್ತಿಲ್ಲಾ. ಅಲ್ಲಿ ಅಮೆರಿಕಾದಲ್ಲಿ ಟ್ರಂಪ್ ಗೆದ್ದಾ ಇಲ್ಲಿ ಭಾರತದಾಗ ಐದನೂರು ಮತ್ತು ಸಾವಿರ ನೋಟನ್ನು ನಮ್ಮಮೋದಿಯವರು ಬ್ಯಾನ ಮಾಡದ್ರು. ನಾನು ನೀವ್ವಸ್ (NEWS) ನೋಡೋದು ಅಸ್ಟಕ್ ಅಸ್ಟೆ. ನನಗೆ ಕ್ಲಿಂಟನ್ ಗೆಲ್ಲುತ್ತಾಳೆ ಅಂತ ಅನಿಸಿತ್ತು. ಇದರ ಬಗ್ಗೆ ನಾನು ನನ್ನ ಹೆಂಡತಿಯೊದನೆ ಬೇಟ್ಟು (bet) ಕಟ್ಟಿದ್ದೆ. ಅದ್ಯಕೊ ಅವಳು ಇಲ್ರಿ ಟ್ರಂಪ್ ಗೆಲ್ಲುತ್ತಾನೆ ನೋಡ್ರಿ ಅನ್ನುತ್ತಿದ್ದಳು. ನಾನು ಅವಳಿಗೆ ಗೆಲಿ ಮಾಡುತ್ತು, ಸುಮ್ಮ ಸುಮ್ಮನೆ ನಾ ಹೇಳಿದ್ದ ಅಪೋಸ್(oppose) ಮಾಡಬ್ಯಾಡ ಇದು ಸನ್ನ ಸನ್ನ ಮಕ್ಕಳುಗಿ ತೀಳಿತ್ಯತಿ ಅಂತ್ತಿದ್ದೆ.

ಆ ಟ್ರಂಪನ್ನ ನೊಡ್ಯಾರ ನೋಡ ಅವನ ಆಕಾರ, ವಿಕಾರವಾದ ಮಾತು. ಅವನ ಒಂದ ಪೊಟದಾಗ ನೆಟಗ್ ಜಗಳಕ್ಕ ಬರಲಾರದಂಗ ಪೊಸ್ ಐತೆನ್ ಹೇಳ, ಅವಂಗ್ಯರ ವೊಟ ಹಕ್ಕಾರ ಹೇಳ ಅಂತ್ತಿದ್ದೆ. ಅದಕ್ಕ ನೀವು ಪೊರ ಪೊರ ವಿಚಾರ ಮಾಡಂಗಿಲ್ಲಾ, ತೆಲ್ಯಾಗ  ಬಂತ್ತಿಲ್ಲ ಅದ ಕರೆ ಅಂತ ಕುರತೀರಿ  ಅಂತ ನಮ್ಮ ಅರಧಾಂಗಿನಿ ನಮಗೆ ಅಂತ್ತಿದ್ರು. ಹೊಗ್ಲಿ ಬಿಡ ಒಂದ ಕಪ್ಪ ಚಾಹಾ ಮಾಡ ಅಂತ್ ಮಾತ್ ಮರಸತ್ತಿದ್ಯಾ.

ಅಲ್ರ ಇದೊಂದ ವಿಚಿತ್ರಾ ಸಾಲಂಗಿಲ್ಲಾ, ನಮ್ಮ ಮೋದಿಯವರು ಐದನೂರ ಮತ್ತ ಸಾವಿರ ನೋಟ ಬ್ಯಾನ  ಮಾಡಬಿಟ್ರು. ಓಟ್ಟ ಓಂದ್ಯಾರಡ ದೀನದಾಗ ಆ ಸೂರ್ಯ ಪಸ್ಚಿಮಕ್ಕೆನರ್ ಹುಟ್ಟಕತ್ತಾನೆನ ಅಂತ ಅನಸಾಕತ್ಯತಿ.

ದೊಡ್ಡವ್ರು ಹೇಳ್ಯಾರ, ಆದದೆಲ್ಲಾ ಓಳ್ಳೆದಕ್ಕ ಅಂತ, ಅದನ್ನ ನಂಬೆ ಜೀವನಾ ಮಾಡುದ್ರಿಪಾ. ತೇಲಿ ಬಾಳ ಕೇಡಿಸಿಕೋಳ್ಳಂಗಿಲ್ಲಾ.

ಐದನೂರು ಮತ್ತ ಸಾವಿರ ನೊಟ್ ಬ್ಯಾನ ಮಾಡುದಿಂದ್ರ ತ್ರಾಸ ಆಕ್ಕ್ಯತಿ ಆದ್ರ ಅದ ಟೆಂಪ್ರರಿ,(temporary)  ಇದ್ರಿಂದ ಮುಂದ ಓಳ್ಯದ ಅಕ್ಕ್ಯತಿ ಅಂತ ಏಟಮ್ (ATM) ಮೂಂದ ರೊಕ್ಕಕ್ಕ ಕೀವ್ (Q) ನಿಂತವ್ರ ಮಾತಾಡ ಹತ್ಯಾರ್.

ಕೆನರಾ ಬ್ಯಾಂಕ ಹುಬ್ಬಳ್ಳಿ ಮುಂದ ಕಿವ್ ನೊಡ್ರಿ. ಇತ್ತ ಟ್ರಂಪನ್ನ ನೊಡ್ರಿ
ಕೆನರಾ ಬ್ಯಾಂಕ ಹುಬ್ಬಳ್ಳಿ ಮುಂದ ಕಿವ್ ನೊಡ್ರಿ. ಇತ್ತ ಟ್ರಂಪನ್ನ ನೊಡ್ರಿ

ಎಸ್ಟೊಕೋಂದ ಮಂದಿ ಮಕ್ಕಳ ಮದಿವಿಗ ಮತ್ತು ಸಾಲಿ(college) ಸಲವಾಗಿ ಕುಡಿಸಿ ಇಟ್ಟದ್ದನ್ನ ಎನ್ ಮಾಡಬೇಂತ್ ಒದ್ಯಾಡ ಹತ್ಯಾರ. ಎಲ್ಲಾ ನಾವ ಭಯಸಿದಂಗ ಹೆಂಗ ಅಕ್ಯತಿ ಹೆಳ್ರಿ. ಇನ್ನೊಂದ ವೀಷಯ ಅಂದ್ರ ಎಲ್ಲಾ ವ್ಯಾಪರಸ್ತರ ಬರಲಾದ್ದ ಉದ್ರಿ ರೊಕ್ಕಾ ಅಂಗಡಿಗೆ ಬಂದ ಜನ ಕೊಡಾಕತ್ತಾರ.

Dr Umesh Bilagi

MBBS, MD, DM (cardiology). I am Interventional cardiologist. Blogging is my passion. Associate professor of cardiology KIMS Hubli. Director and consultant at Tatwadarsha Hospital Hubli. Owner of Jeevan Jyoti Hospital Hubli. Mobile +91 9343403620.

2 thoughts to “ಅಳುವುದೊ ನಗುವುದೊ ನೀವೆ ಹೆಳಿ,”

Leave a Reply

Your email address will not be published. Required fields are marked *